ಚಿತ್ರ: ಪ್ರೇಮರಾಗ ಹಾಡು ಗೆಳತಿ
ಸಾಹಿತ್ಯ: ಎಸ್.ಎಂ. ಪಾಟಿಲ್
ಸಂಗೀತ: ಇಳಯರಾಜಾ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಂದ್ರಿಕಾ

ಬಾ ಬಾರೆ ಓ ಗೆಳತಿ
ಬಾ ಬಾರೆ ಓ ಗೆಳತಿ
ನಿನಗಾಗಿಯೆ ಮನ ಹಾಡಿದೆ
ನಲಿದಾಡಿದೆ ಬಾ
ಎದೆಯೊಳಗೆ ಜೀವ ನೀನು
ಮನದೊಳಗೆ ಭಾವ ನೀನು
ಬಾ ಬಾರೆ ಓ ಗೆಳತಿ
ಬಾ ಬಾರೆ

ಸಂಭ್ರಮ ಎಲ್ಲೆ ಮೀರಿದೆ
ಸಡಗರವೆ ಹೃದಯ ತುಂಬಿದೆ
ನಿನ್ನ ಸ್ಪಂದನ ತಂದ ಕಂಪನ
ನಲ್ಲ ಬಳಿಗೆ ಸೆಳೆದು ತಂದಿದೆ

ಓ ಚೆಲುವೆ ಎಲ್ಲಿಂದ ಬಂದೆ
ಬಂದ ಹಾಗೆ ಮನ ತುಂಬಿಕೊಂಡೆ
ನದಿ ಸಾಗರವ ಸೇರುವಂತೆ
ನಿನ್ನ ಕಾಣದೆ ನಾ ಹರಿದು ಬಂದೆ
ನಿನ್ನ ನೋಟದಿ ಸೆರೆಯಾದೆ ನಾ
ಸವಿ ಮಾತಾಡು ಬಾ

ಬಾ ಬಾರೊ ಓ ಗೆಳೆಯ
ಬಾ ಬಾರೊ!

ಸಂಧ್ಯೆಯ ಬಾನಂಚಲಿ
ನಿನ್ನ ನಗೆಯು ಹರಡಿದಂತಿದೆ
ಇಲ್ಲಿ ಚುಂಬಕ ಧ್ವನಿ ತೇಲಿದೆ
ನಿನ್ನ ಸ್ವರದ ಇಂಪು ಚೆಲ್ಲಿದೆ
ಮಲೆನಾಡೆ ಕಂಗೊಳಿಸುವಂತೆ
ನೀ ಚೈತ್ರದ ಋತುವಾಗಿ ಬಂದೆ
ಹಿತ ನೀಡೊ ತಂಗಾಳಿಯಂತೆ
ಮೈ ಮನವ ನೀ ಬಳಸಿ ಬಂದೆ
ಅನುರಾಗದ ಸುಧೆ ನೀಡಿದೆ
ಜೊತೆ ನೀನಾಗು ಬಾ

ಬಾ ಬಾರೊ ಓ ಗೆಳೆಯ
ಬಾ ಬಾರೊ ಓ ಗೆಳೆಯ
ನಿನಗಾಗಿಯೆ ಮನ ಹಾಡಿದೆ
ನಲಿದಾಡಿದೆ ಬಾ
ಎದೆಯೊಳಗೆ ಜೀವ ನೀನು
ಮನದೊಳಗೆ ಭಾವ ನೀನು

ಬಾ ಬಾರೆ ಓ ಗೆಳತಿ
ಬಾ ಬಾರೆ

Category: ಕನ್ನಡ ಚಿತ್ರಸಾಹಿತ್ಯ
Category: ಪ್ರೇಮರಾಗ ಹಾಡು ಗೆಳತಿ ಚಿತ್ರ
Category: ಎಸ್.ಎಂ. ಪಾಟಿಲ್ ಸಾಹಿತ್ಯ
ವರ್ಗ: ಎಸ್.ಪಿ. ಬಾಲಸುಬ್ರಮಣ್ಯಂ
ವರ್ಗ: ಚಂದ್ರಿಕ